ಬುಧವಾರ, ಸೆಪ್ಟೆಂಬರ್ 14, 2022
#ವೇಷ ಲೇಖನ ಮಾಲೆ ಭಾಗ ೫
ಬುಧವಾರ, ಸೆಪ್ಟೆಂಬರ್ 7, 2022
#ವೇಷ ಲೇಖನ ಸರಣಿ ಭಾಗ೩
ಭಾಗ ೩.
ಅಂತೂ ನಮ್ಮ ಬ್ರಹ್ಮ ಸೃಷ್ಟಿ ಶುರು ಮಾಡಿದ. ಅವನೊಬ್ಬನೇ ಎಷ್ಟು ಅಂತ ಮೂರ್ತಿಗಳನ್ಬು ಕೆತ್ತಿಯಾನು? ಕಲ್ಲು ಹುಡುಕಬೇಕು, ಚಾಣ ಸಾಣೆ ಹಿಡಿಯಬೇಕು, ಕೆತ್ತಬೇಕು, ಬಿಸಿ ಮಾಡಬೇಕು, ದೃಷ್ಟಿ ನೀಡಬೇಕು, ಇಷ್ಟಾದರೆ ಸಾಕೆ?? ಈ ಮಕ್ಕಳಿಗೆ ಸುಮ್ಮನೆ ಇರುವ ಬೊಂಬೆ ಕೊಟ್ಟು ನೋಡಿ? ಎರಡೇ ನಿಮಿಷ. ಮತ್ತೆ ರಂಪ ಶುರು. ಅದೇ ಗೊಂಬೆಗೆ ಕಿವಿಹಿಂಡಿ ಟರ್ರ್ ರ್ರ್ ಎಂದು ತಿರುಗುವಂತೆ ಮಾಡಿ; ಆಡುತ್ತಾ ಕುಳಿತಿರುತ್ತವೆ. ಹಾಗೆಯೇ ಬ್ರಹ್ಮನೂ ನಿರ್ಜೀವ ಬೊಂಬೆಗಳಿಗೆ ಎಲ್ಲಿಂದಲೋ ಹುಡುಕಿ ಹೆಕ್ಕಿ ತಂದು ಬ್ಯಾಟರೀ ಅಳವಡಿಸುತ್ತಾನೆ. ಅದಕ್ಕೆ ಜೀವ, ಆತ್ಮ ಅಂತ ಹೆಸರಿಡೋಣ.
ಒಮ್ಮೊಮ್ಮೆ ಅವ್ಯವಸ್ಥೆ ಆಗುವುದುಂಟು. ಬ್ಯಾಟರಿಯ ಕ್ಷಮತೆಗೆ ಮೀರಿದ ಆಕಾರದ ಬೊಂಬೆಯಾದರೆ ಬೇಗ ಕೆಳಗೆ ಉರುಳುತ್ತದೆ. ಆಕಾರ ಮೀರಿದ ಕ್ಷಮತೆ ಕೊಟ್ಟನೋ, ಅತೀ ಚಟುವಟಿಕೆಯಿಂದ ಬಾಕಿ ಎಲ್ಲರೂ ಕಂಗಾಲಾಗುತ್ತಾರೆ. ತೊಂದರೆ ಏನು ಅಂದ್ರೆ, ಅಳವಡಿಸಿದ ಜೀವ ಹೊಂದಿಕೆಯಾಗಲಿಲ್ಲ ಅಂದ್ರೆ ಅದನ್ನು ತೆಗೆದು ಬೇರೆ ಫಿಟ್ ಮಾಡುವ ಹಾಗಿಲ್ಲ. ಮೂರ್ತಿಯೇ ಬೇರೆ ಆಗಬೇಕು ಮತ್ತೆ.
ಆದರೂ ಮೆಚ್ಚಬೇಕು. ನಮ್ಮ ಬ್ರಹ್ಮ ಅಡ್ಡಿಯಿಲ್ಲ. ಕೆಲವು ಸೃಷ್ಟಿ ಮಾಡಿದ. ಸಾಕಾಗಿ ಹೋಯಿತು. ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ delegation of power ಪರಿಚಯ ಮಾಡಿಸಿಕೊಟ್ಟವನು ಅವನೇ. ಅವನ ಮಕ್ಕಳಲ್ಲೇ ಕೆಲವರನ್ನು ಪ್ರಜಾಪತಿಗಳು ಎಂದು ಹೆಸರಿಸಿದ. ಅವರಿಗೆಲ್ಲ GPA ನೀಡಿದ.
ಅಂತಹ ಅವನ ಮಕ್ಕಳಲ್ಲಿ ಒಬ್ಬರು ಕಶ್ಯಪ ಬ್ರಹ್ಮರು. ವಿಶೇಷ ಅಂದರೆ ಈ ಪ್ರಜಾಪತಿಗಳನ್ನೂ ಬ್ರಹ್ಮ ಅಂತಲೇ ಕರೆಯುವುದು. ಎಲ್ಲಾ GPA ಪ್ರಭಾವ. ಕಶ್ಯಪರಿಗೆ ಹದಿಮೂರು ಮಂದಿ ಮಡದಿಯರು. ಅವರಲ್ಲಿ ನಮ್ಮ ದಿತಿಯೂ ಒಬ್ಬಳು.
ಪುಂಡುವೇಷಗಳು ಇವೆಯಲ್ಲಾ! ಅವರು ಕಶ್ಯಪರಿರುವ ಡೇರೆಗೆ ಬಂದರು. ಪುಂಡತನ ಹೋಗಬೇಕಲ್ಲಾ? ಅದಕ್ಕೆ ಆ ವೇಷವೂ ಬೇಡ; ಆವೇಷವೂ ಬೇಡ ಅಂತ ರಾಕ್ಷಸ ವೇಷದ ಪೆಟ್ಟಿಗೆಗೆ ಕೈ ಹಾಕಿದರು. ಹೊಸಬರಾದರೂ ಯಾರೂ ತಡೆಯಲಿಲ್ಲ. ವೇಷಕ್ಕೆ ಕೂತರು.
ಆ ಕಡೆ ಕಶ್ಯಪರ ವೇಷ ತಯಾರಾಗ್ತಿದೆ. ರಾಕ್ಷಸರ ಮುಖ ಬರೆಯುವಷ್ಟರಲ್ಲೇ ಕಶ್ಯಪರ ವೇಷ ಪೂರ್ಣವಾಯಿತು. ಕಶ್ಯಪರ ವೇಷ ಮಾಡುವುದು ಸುಲಭ, ತಲೆಗೊಂದು ಜುಟ್ಟು, ಹಣೆಗೆ ಬೊಟ್ಟಿಟ್ಟು ಕಂಕುಳಲ್ಲಿ ದರ್ಬೆ ಕಟ್ಟು ಹಿಡ್ಕೊಂಡ್ರೆ ವೇಷ ಮುಗೀತು. ಮತ್ತೆ ಒಂದು ಕಾವಿ ಪಂಚೆ ಕಚ್ಚೆ ರುದ್ರಾಕ್ಷಿ ಮಾಲೆ.
ಆದರೆ ಕಶ್ಯಪರಾಗುವುದು ಕಷ್ಟ. ದಿನವೂ ತಣ್ಣೀರಿನ ಸ್ನಾನ ಮೂರು ಹೊತ್ತೂ ವೇದೋಕ್ತವಾದ ನಿತ್ಯಾಹ್ನಿಕ ಅದೂ ಪುಸ್ತಕದಲ್ಲಿ ಹೇಳಿದ ಹಾಗೇ; ಚೂರೂ ಆಚೀಚೆ ಆಗುವಂತಿಲ್ಲ. ಮತ್ತೆ ಲೋಕ ಕಲ್ಯಾಣಕ್ಕಾಗಿ ಹೋಮ ಹವನ ನಡೆಸುತ್ತಲೇ ಇರಬೇಕು. ಅದೆಲ್ಲದರ ಮಧ್ಯೆ ಹದಿಮೂರು ಹೆಂಡಿರು. ಒಬ್ಬೊಬ್ಬರದೂ ಒಂದೊಂದು ಸ್ವಭಾವ. ಸಾಲದ್ದಕ್ಕೆ ಬ್ರಹ್ಮ ಕೊಟ್ಟ ಕೆಲಸ ಇದೆಯಲ್ಲಾ??
ದಿತಿದೇವಿ ಜಂಭದ ಕೋಳಿ ದಕ್ಷ ಪ್ರಜಾಪತಿಯ ಮಗಳು. ಒಂದು ರೀತಿ ಜಂಭ, ದುಡುಕು ಸ್ವಭಾವ, ತಾಮಸೀ ಸ್ವಭಾವಗಳು ಅವಳ ಹುಟ್ಟು ಗುಣ. ಕಶ್ಯಪರದ್ದು ಗೊತ್ತಲ್ಲಾ? ಯಾವಾಗಲೂ ಪೂಜೆ ಪುನಸ್ಕಾರ. ಅದಕ್ಕೇ ಆದ್ಯತೆ. ಅದರ ನಡುವೆ ಬಿಡುವು ಸಿಕ್ಕಾಗ (ಸಿಕ್ಕರೆ) ಇನ್ನಿತರ ಕೆಲಸಗಳು. ಅ ಸಮಯದಲ್ಲಿ ಒಂದು ಭಾಗ ಹೆಂಡಿರದ್ದು. ಅದರ ಹದಿಮೂರನೇ ಒಂದು ಭಾಗ ದಿತಿ ದೇವಿಗೆ.
ತನ್ನ ತಂಗಿ ಅದಿತಿ ದೇವಿಯ ಮಕ್ಕಳು ದೇವತೆಗಳು. ಅವರನ್ನು ಎಲ್ಲರೂ ಸೇರಿ ದೊಡ್ಡ ಜನ ಅಂತ ಮಾಡಿ ಆಗಿತ್ತು. ಸ್ವರ್ಗದ ಅಧಿಕಾರ ನೋಡಿ! ಹೊಟ್ಟೆಗಿಚ್ಚು ಯಾರಾದರೂ ಪಡಲೇ ಬೇಕು. ಅಂಥಾ ಸಂಪತ್ತು. ಓಡಾಡುವುದಕ್ಕೆ ಉಚ್ಛೈಶ್ರವ, ಐರಾವತ, ಬೇಕಾದುದನ್ನು ಕೊಡುವುದಕ್ಕೆ ಕಾಮಧೇನು ಕಲ್ಪ ವೃಕ್ಷ ಇನ್ನೂ ಅನೇಕ ವಸ್ತು - ವ್ಯಕ್ತಿ ವಿಶೇಷಗಳು. ಸಾಲದ್ದಕ್ಕೆ ಕಶ್ಯಪರನ್ನೂ ಸೇರಿ ಮುನಿಜನರೆಲ್ಲ ಮಾಡುವ ಉಪಾಸನೆಗಳ, ಹೋಮ ಹವನಗಳಲ್ಲಿ ನೆನೆಯುವುದು ಇವರನ್ನೇ. ಹಾಗಾಗಿ ಇವಳಿಗೆ ತನ್ನ ಮಕ್ಕಳಿಗೆ ಈ ಎಲ್ಲಾ ಸಂಪತ್ತಿನ ಸುಖ ಸಿಗುತ್ತಿಲ್ಲವಲ್ಲ? ಎಂಬ ಸಹಜ ಕೊರಗೂ ಇತ್ತು. ತಾನು ಹಿರಿಯಕ್ಕನಲ್ಲವೇ? ಕಶ್ಯಪರು ತನ್ನ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆಂಬ ಭಾವನೆ ಬೇರೆ.
ಈ ಕಶ್ಯಪರು ಮಾಡುತ್ತಿದ್ದುದೂ ಹಾಗೇ ಅನ್ನಿ. ದಿತಿಗೆ ಇನ್ನೊಂದು ಬೇಜಾರಿತ್ತು. ತನ್ನ ಮಕ್ಕಳನ್ನು ಕಾಯುವಲ್ಲಿ ಬೆಳೆಸುವಲ್ಲಿ ತನ್ನ ಗಂಡನಿಗೆ ಆಸಕ್ತಿಯಿಲ್ಲ ಎಂದು. ಒಮ್ಮೆ ಏನಾಯ್ತು ಅಂದ್ರೇ….
ಶುಕ್ರವಾರ, ಸೆಪ್ಟೆಂಬರ್ 2, 2022
#ಸುಭಾಷಿತಗಳೆಂಬವಿಸ್ಮಯ
#ಸುಭಾಷಿತಗಳೆಂಬವಿಸ್ಮಯ
ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದ
ಶ್ರೀ ಆದಿ ಶಂಕರಾಚಾರ್ಯರ ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದದಯತ್ನ. ತಪ್ಪುಗಳಿದ್ದರೆ ಕ್ಷಮಿಸಿ, ಹರಸಿ. ಶಿವ ಶಿವ ಶಿವ ಭೋ ಅಣು ರೂಪದಿಂದಣುಗನಾಗಿ ಬಪ್ಪ ಮೊದಲ...